ನಾ ರಮಿಸುವಾಗ
ನೀ ವಿರಮಿಸದಿರು ಪ್ರಿಯೇ...
ಏರಿಳಿತಗಳು ಸಹಜ
ಅಲ್ಲಿ ನಾ ಉತ್ಕಟದ ಆಳ ಗರ್ಭಕ್ಕಿಳಿಯುತ್ತೇನೆ
ಬೆವರಿನ ವಾಸನೆ ಅತ್ತರಿನಂತೆ ಆಘ್ರಾಣಿಸುತ್ತದೆ
ಸಿಲಿಕಾನ್ ಸಿಟಿಯ ಬೆಡಗಿ ನೀನು
ನಾನೋ ಕಡಲ ತೀರದ ಪೋರ
ನನಗಿನ್ನೂ ತೀರದ ದಾಹ...
ಬರುವೆ ನಾ ಮತ್ತೊಮ್ಮೆ ನಿನ್ನ ಹುಡುಕಿ..
ನಿನ್ನ ತೋಳ ತೆಕ್ಕೆಯಲ್ಲಿ ಬಂಧಿಯಾಗಲು ...
.. ಹರ್ಷಾದ್ ವರ್ಕಾಡಿ