

ಸತ್ತ ಹೆಣಕೂಗುತ್ತಿದೆ
ಆದರೆ ನನಗದು ಕೇಳಿಸುವುದಿಲ್ಲ
ನಿಶ್ಯಬ್ಧವಾಗಿ....
ಕೊನೆಯದಾಗಿ ಹೊರಹೊಮ್ಮುವ
ಕರ್ಪೂರ, ಅಗರಬತ್ತಿಗಳ
ಘಮ್ಮನೆಯ ಪರಿಮಳಕ್ಕೆ
ವಿಚಿತ್ರ ವಾಸನೆಯಿದೆ...
ಬಿಳಿ ವಸ್ತ್ರದಲ್ಲಿ ಸುತ್ತಿದ
ಕೊರಡು ಅದು...
ಬರೀ ಕೊರಡು
ನಿರ್ಜೀವ...
ಅಗೋ
ಹೆಣ ಅದೇನೋ
ನುಡಿಯುತ್ತಿದೆ......
ಹೊತ್ತೊಯ್ಯುವವರ ನಿರಂತರ ಮಂತ್ರ
ಅಳಲನ್ನು ತಡೆದಿದೆ.....
ಹರ್ಷಾದ್ ವರ್ಕಾಡಿ