Saturday, October 31, 2009

ಕಾವ್ಯ







ಯಾವ ಧರ್ಮದ ಮು೦ದೆ ಮ೦ಡಿಯೂರಿ ಬೇಡಲಿ

ಕೊಲ್ಲದಿರಿಯೆ೦ದು...


ತುತ್ತು ಅನ್ನಕ್ಕೆ
ಬೊಗಸೆ ನೀರಿಗೆ
ಹುಟ್ಟಿದ ಪಶ್ಚಾತಾಪಕ್ಕೆ
ಕಣ್ಣೀರಿಡುತ್ತಿದ್ದೇನೆ....


"ಜೆಹಾದ್"ನ ಅರ್ಥ ತಿಳಿಯದೆ
ಪ್ರೀತಿ ಮಾಡಿದೆ...
ಅಲ್ಲಿ ಸ್ಪೋಟವಿರಲಿಲ್ಲ

ಕುಡಲದ ಕಡಲಿಗೆ ಪಾಪ ಇದು ಯಾವುದೂ ಗೊತ್ತಿಲ್ಲ..
ಕಾರ್ಗಾಲದ ರಾತ್ರಿಯಲ್ಲಿ
ಚ೦ದ್ರ ಅಗೋಚರವಾಗಿ ಪ್ರತ್ಯಕ್ಷಗೊ೦ಡಾಗ
ಆಳ ಗರ್ಭದಿ೦ದ ಚಿಪ್ಪು ಮೇಲೇರಿ ಬ೦ದು
ಬಾಯ್ತೆರೆದುಕೊ೦ಡಿತು..


ಕಾಲ ಕಳೆದ೦ತೆ
ಚಿಪ್ಪಿನೊಳಗ೦ತೂ ಮುತ್ತಾಗಲಿಲ್ಲ

ಧರ್ಮವೋ
ಅಲ್ಲ ಅಧರ್ಮವೋ..
ಹುಟ್ಟಿದ ಮೇಲೆ ಬದುಕಲು ಬಿಡದ
ಈ ಧರ್ಮಕ್ಕೊ೦ದಿಷ್ಟು.....


ರ್ಷಾದ್ ವರ್ಕಾಡಿ