Monday, July 30, 2012



ಮಂಗಳೂರಿನ ತಾಲಿಬಾನಿಗಳು...!
 * ಹರ್ಷಾದ್ ವರ್ಕಾಡಿ , ಪತ್ರಕರ್ತ 
   vorkady@gmail.com


ಮಂಗಳೂರಿನ ಹೋಂ ಸ್ಟೇ ಯಲ್ಲಿ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆ ಧಾಳಿ ಮಾಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಲ್ಲಿದ್ದ  ಯುವತಿಯರನ್ನು ಅಟ್ಟಾಡಿಸಿ  ಹಲ್ಲೆ ಮಾಡಿದ ಭಯಾನಕ  ರೌದ್ರ ತಾಂಡವ ದೃಶ್ಯವನ್ನು ಇಡೀ ಜಗತ್ತೇ ನೋಡಿದೆ.ಧಾಳಿ ಮಾಡುವ ಸಂಧರ್ಭದಲ್ಲಿ ಹಿಂದೂ ಧರ್ಮ, ಸಂಸ್ಕೃತಿ  ಸಂರಕ್ಷರ ಭಾಷೆಯನ್ನು ಬಹುಶ ತುಳುವರು ಮಾತ್ರವೇ ಅರ್ಥೈಸಿಕೊಳ್ಳಲು ಸಾಧ್ಯ.ಅದು ಅರ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟನ ಭಾಷೆ.ಇಲ್ಲಿ ಧಾಳಿ ಮಾಡಿ, ಅಲ್ಲಿದ್ದ ಯುವತಿಯರ ಮಾನಭಂಗ(!) ಮಾಡಿದವರೆಲ್ಲರೂ ಕೀಳು ವರ್ಗದವರು.ಅಂದರೆ ಸಾಮಾಜಿಕ ಭಾಷೆಯಲ್ಲಿ ಮೂರನೇ ದರ್ಜೆಯವರು.ಇಂತಹ ಘಟನೆಗಳು ಮಂಗಳೂರಿನಲ್ಲಿ ಸರ್ವೇ ಸಾಮಾನ್ಯ.ಮಂಗಳೂರಿನ ಹೋಂ ಸ್ಟೇ ಪ್ರಕರಣ  ಕ್ಯಾಮೆರಾ ಮುಂದೆ ನಡೆದು, ಚಾನೆಲುಗಳಲ್ಲಿ ಬಿತ್ತರಿಸಿದ ಮಾತ್ರಕ್ಕೆ "ಭಯಾನಕ' ರೂಪವನ್ನು ಪಡೆದಿದೆ.ಕ್ಯಾಮೆರಾ ಚಿತ್ರೀಕರಣ ನಡೆಯುತ್ತಿದೆ ಎಂಧು ಅರಿತ ಹಿಂದೂ ಧರ್ಮ ಪಡೆಗಳು ಮಾಡಿದ ರೀತಿಯನ್ನು ನೋಡಿದ ಮೇಲೆ ಕ್ಯಾಮೆರಾ ಇಲ್ಲದ ಕಡೆ ಅವರ ಭಯಾನಕತೆಯನ್ನು ಊಹಿಸಿ ನೋಡಿ? ಇತ್ತೇಚೆಗೆ ಓರ್ವ ಮುಸ್ಲಿಂ ಹುಡುಗನ ಜತೆ ಇದ್ದ ಹಿಂದೂ ಹುಡುಗಿ ಯನ್ನು ಸಂಸ್ಕೃತಿಯ ಹೆಸರಿನಲ್ಲಿ ಬೆನ್ನಟ್ಟಿ ಹಿಡಿದ ಈ ತಾಲಿಬಾನಿಗಳು ಆ ಇಬ್ಬರ ಮೇಲೆ ಇದೆ ರೀತಿಯಲ್ಲಿ ಹಲ್ಲೆ ಮಾಡಿ, ಬಳಿಕ ಯುವತಿಯನ್ನು ಅಲ್ಲಿಂದ ಹೊತ್ತೊಯ್ದು ಬಳಿಕ ಮಾಡುವುದನ್ನೆಲ್ಲ ಸಾಮೂಹಿಕವಾಗಿ  ಮಾಡಿದ್ದು ,ಭಯದಿಂದ ಆ ಹುಡುಗಿ ಈ ಘಟನೆಯನ್ನು ಯಾರಲೂ ಹೇಳಿಲ್ಲ. ಇಂತಹ ಘಟನೆಗಳು ಅದೆಷ್ಟೋ ನಡೆದರೂ ರಹಸ್ಯವಾಗಿಯೇ ಉಳಿಯುತ್ತವೆ. " ನಿಕ್ಕ್ ಬ್ಯಾರಿ ಆಪುಂದಾ? ಯಾನ್ ಆವಂದ?" (ನಿನಗೆ ಬ್ಯಾರಿ ಮಾತ್ರ ಆಗೋದಾ? ನಾನು ಆಗೋದಿಲ್ವ?) ಅಂತ ಹೇಳಿ ಆ ಯುವತಿಯನ್ನು ಬಳಿಕ ತಾವೇ ಸಾಮೂಹಿಕವಾಗಿ ಬಳಸುತ್ತಾರೆ...ಇಂತಹ ಪ್ರಕರಣದಲ್ಲಿ ಪೊಲೀಸರಲ್ಲಿ ಕಂಪ್ಲೇಂಟ್ ಕೊಟ್ಟರೆ ಪರಿಸ್ಥಿತಿ ಅದಕ್ಕಿಂತ ಭಾಯಾನಕವಾಗುತ್ತದೆ,ಯಾಕೆಂದರೆ ಪೋಲಿಸ್ ಇಲಾಖೆಯಲ್ಲಿಯೂ ಇಂತಹ ಮಂದಿ ನುಸುಳಿಕೊಂಡಿದ್ದು, ಅವರೂ ಇದೆ ಪ್ರಶ್ನೆಯನ್ನು ಅವರಲ್ಲಿ ಹಾಕ್ತಾರೆ.ಈ ಘಟನೆಗಳನ್ನು ಮೊಬೈಲುಗಳಲ್ಲಿ ಚಿತ್ರೀಕರಿಸಿ ಬಳಿಕ ಆ ಯುವತಿಯರನ್ನು  ಬ್ಲಾಕ್ ಮೇಲ್ ಮಾಡುತ್ತಾರೆ.ಮಂಗಳೂರಿನ ಭಾಷೆಯಲ್ಲಿ ಹೇಳೋದಾದರೆ ಇದು "ಮಾಮೂಲು" ಸಂಗತಿ,ಇಲ್ಲಿ  ಮಾಮೂಲು ಎಂಬ ಪದಕ್ಕೆ ಎರಡು ಅರ್ಥಗಳಿವೆ. ಒಂದು ಮಾಮೂಲು ಅಂದರೆ ಸರ್ವೆ ಸಾಮಾನ್ಯ. ಇನ್ನೊಂದು ಮಾಮೂಲು ಅಂದ್ರೆ "ಹಫ್ತಾ"ಎಂಬ ಅರ್ಥ ಬರುತ್ತದೆ. ಇಲ್ಲಿ ಸಂಘ ಪರಿವಾರದ ವಿವಿಧ ಬ್ರಾಂಚ್ ಗಳಿಗೆ ಮಾಮೂಲು ಕೊಟ್ಟರೆ ಮತ್ತೆ ಧರ್ಮ, ಸಂಸ್ಕೃತಿಯ ಸಮಸ್ಯೆಯಿಲ್ಲ.ಅದರ ಪೇಟೆಂಟ್ ಇವರು ಕೊಡುತ್ತಾರೆ..ಗೋ ಸಾಗಾಟ ದಾರರು ಮಾಮೂಲು ಕೊಟ್ಟರೆ ಇದೆ ಭಜರಂಗಿಗಳು ಸಾಗಾಟ ದಾರರಿಗೆ  ಸೆಕ್ಯುರಿಟಿ ಕೊಡುತ್ತಾರೆ.ಕೇವಲ ತೋಳು ಬಲವನ್ನು ಉಪಯೋಗಿಸಿಕೊಂಡು ಯುವತಿಯರನ್ನು ಅಟ್ಟಾಡಿಸುವ ಇಲ್ಲಿನ ಹಿಂದೂ ತಾಲಿಬಾನಿಗಳಿಂದಾಗಿ  ಕಳೆದ ಒಂದು ದಶಕದಲ್ಲಿ ಅದೆಷ್ಟೋ ಯುವತಿಯರು ಮಾನಕ್ಕೆ ಅಂಜಿ, ಭಯಗೊಂಡು ಆತ್ಮ ಹತ್ಯೆ ಮಾಡಿದ್ದಾರೆ. ಇನ್ನು ಅದೆಷ್ಟೋ ಯುವತಿಯರು ಮಾನಸಿಕ ಅಸ್ವಸ್ಥ ರಾಗಿದ್ದಾರೆ. ಮಂಗಳೂರಿನಲ್ಲಿ ಇಂತಹ ಯುವಕರು ಮಾತ್ರವಲ್ಲ, ಇಲ್ಲಿನ ಇಡೀ ಮಂಗಳೂರಿನ  ವ್ಯವಸ್ಥೆಯೇ ಹಾಗಾಗಿದೆ.ಯಾವುದೇ ಇಲಾಖೆಯನ್ನು ಬೇಕಾದರೆ ಕೈಗೆತ್ತಿಕೊಳ್ಳಿ. ಎಲ್ಲಾ ಕಡೆಯೂ ಇದೆ ತೆರನಾದ "ಧರ್ಮ ರಕ್ಷಣೆ"ನಡೆಯುತ್ತಲೇ ಇರುತ್ತದೆ. ಮಂಗಳೂರಿನ  ಮಟ್ಟಿಗೆ  ಸ್ವಾತಂತ್ರ್ಯ , ಪ್ರಜಾಪ್ರಭುತ್ವ ಎಂಬುದು  ಅಪರಿಚಿತ ಪದಗಳು. ಇಲ್ಲಿನ ಜಾತ್ರೆಗಳಿಗೆ  ಮುಸಲ್ಮಾನರು  ಹೋಗಕೂಡದು .ಮುಸ್ಲಿಂ ಹುಡುಗರ  ಅಂಗಡಿಗೆ  ತೆರಳಿ  ಹಿಂದೂ ಹುಡುಗಿಯರು  ಮೊಬೈಲಿಗೆ ರೀ ಚಾರ್ಜ್   ಮಾಡ ಬಾರದು ,ಮುಸ್ಲಿಮರ   ಅಂಗಡಿಗಳಲ್ಲಿ  ಹಿಂದೂ ಹುಡುಗಿಯರು  ಕೆಲಸಕ್ಕೆ  ನಿಲ್ಲಬಾರದು  ಹೀಗೆ ಇವರ  ಪಟ್ಟಿ  ಬೆಳೆಯುತ್ತಲೇ  ಹೋಗುತ್ತದೆ. ಇವರನ್ನು ಪ್ರಶ್ನಿಸುವ ಯಾರೇ ಆಗಲಿ ಅವರಿಗೂ ಇದೆ ಗತಿ. ಆದ್ರೆ ಮುಸಲ್ಮಾನರ ಅಂಗಡಿಗಳಲ್ಲಿ ಕೆಲಸಕ್ಕೆ ಹಿಂದೂ ಹುಡುಗಿಯರನ್ನು ಇದೆ ಹಿಂದೂ ಧರ್ಮ ರಕ್ಷಕರು ನೇಮಿಸುತ್ತಾರೆ. ಇವರಿಗೆ ಒಂದಿಷ್ಟು ಕಮಿಷನ್ ಕೊಡಬೇಕು ಅಷ್ಟೇ .(ಉದಾ: ಮಂಗಳೂರಿನ ಸಿಟಿ ಸೆಂಟರ್.).ಈ ಹಿಂದೆಲ್ಲ ಅಪಘಾನಿಸ್ಥಾನದಲ್ಲಿ ತಾಲಿಬಾನಿಗಳು ಧರ್ಮದ ಹೆಸರಿನಲ್ಲಿ ಮಾಡುವ ಅವಾಂತರ ಗಳ ಬಗ್ಗೆ ವಾರ್ತಾ ಮಾಧ್ಯಮಗಳಲ್ಲಿ  ಓದಿ ತಿಳಿದಿದ್ದ ಮಂದಿಗೆ ಇದೀಗ ನಮ್ಮ ದೇಶದಲ್ಲೂ ಹೀಗೆ ಅದರ ನೇರ ದರ್ಶನವಾಗಿದೆ. ಅದೂ ಮಂಗಳೂರಿನಲ್ಲಿ ಅತೀ ಹೆಚ್ಚು ಎಂಬುದು ಇಲ್ಲಿನ ವಿಶೇಷ.  



ಮಂಗಳೂರಿನ ಹೋಂ ಸ್ಟೇ ಪ್ರಕರಣದಲ್ಲಿ ಪೊಲೀಸರು ಮಂಗಳೂರಿನ ತಿರುಗಿ  ಬೀಳಲು  ಕೆಲವು  ಕಾರಣಗಳಿವೆ . ಇಲ್ಲಿ ಪೋಲೀಸರ  ಕಾರ್ಯಾಚರಣೆಯನ್ನು   ನಾವು  ಶ್ಲಾಘಿ ಸುವುದು   ಅವರ ನೈತಿಕ  ನಿಲುವಿನಿಂದ  ಖಂಡಿತಾ  ಅಲ್ಲ . ಇಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ ಕಸ್ತೂರಿ  ಚಾನೆಲ್  ವರದಿಗಾರ  ನವೀನ  ಶೆಟ್ಟಿ  ಸೂರಿಂಜೆ  ಹಾಗೂ  ಸಹಾಯಿ  ಚಾನೆಲ್ ಕ್ಯಾಮೆರಮೆನ್ ಶರಣ್  ಮೇಲೆ ಕೇಸು  ದಾಖಲಿಸಿದ್ದನ್ನು   ನೋಡೋದಾದರೆ  ಇದು ಸ್ಪಷ್ಟವಾಗುತ್ತದೆ . 2008 ರಲ್ಲಿ  ಮಂಗಳೂರಿನ ಪಬ್  ಧಾಳಿಯಲ್ಲಿ  ಯಾವ  ಮಾಧ್ಯಮದವರ ಮೇಲೂ  ಪೊಲೀಸರು  ಕೇಸು  ದಾಖಲಿಸಿರಲಿಲ್ಲ ಯಾಕೆ? . ಇಲ್ಲಿ ಇನ್ನೊಂದು ಅಂಶವನ್ನು  ಗಮನಿಸುವುದಾದರೆ  ಮೊನ್ನೆ  ಅನ್ಯ  ಕೋಮಿನ  ಜೋಡಿ  ಇದೆ ಎಂಬ ಗುಮಾನಿಯಲ್ಲಿ  ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಲ್ಲಿಗೆ  ಧಾಳಿ ಮಾಡಿದ್ದಾರೆ.ಇಲ್ಲಿ "ಅನ್ಯ ಕೊಮಿಯ ಜೋಡಿ"( ಇದು ಕರಾವಳಿಯ ಪತ್ರಿಕೆಗಳ ಸಾರ್ವತ್ರಿಕ ಪದ) ಇಲ್ಲದಿದ್ದಾಗ ಮತ್ತು ಇಡೀ ಮಂಗಳೂರಿನ ಜನ ಪ್ರತಿಭಟಿಸಿದಾಗ ಪೋಲೀಸರ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಲ್ಲಿದ್ದುದು ಶ್ರೀಮಂತರ ಮಕ್ಕಳು ಹಾಗೂ ಪ್ರಮುಖರ ಅಧಿಕಾರಿಗಳ  ಮಕ್ಕಳು ಎಂಬ ಕಾರಣಕ್ಕೆ ಅದನ್ನು ಚಿತ್ರೀಕರಿಸಿದ ಮಾಧ್ಯಮದವರ ಮೇಲೆ ಮಂಗಳೂರಿನ  ಪೋಲೀಸ್ ಆಯುಕ್ತ ತಿರುಗಿ ಬಿದ್ದಿದ್ದು ಎಂಬುದಕ್ಕೆ ಅನುಮಾನವಿಲ್ಲ. ಹೋಂ ಸ್ಟೇ ಗೆ ಆಗಮಿಸಿದ ಪೊಲೀಸರು ಅಲ್ಲಿನ ಹಿಂದೂ ಜಾಗರಣ ವೇದಿಕೆಯವರಿಗೆ ಯಾವುದೇ ಕಪಾಳ ಮೋಕ್ಷ ನಡೆಸಲಿಲ್ಲ, ಬದಲಿಗೆ ಅಲ್ಲಿ ಧರ್ಮ ಸಂರಕ್ಷಕರು ಹಿಡಿದು ಎರ್ರಾ ಬಿರ್ರಿ ಹೊಡೆದು  ಕೊಟ್ಟ ಅದೇ ಅಮಾಯಕ ಯುವಕರಿಗೆ ಪೊಲೀಸರು ಮತ್ತೆ  ಹೊಡೆದಿದ್ದಾರೆ. ಅಲ್ಲಿನ ವಿಡಿಯೋ ಗಳನ್ನೂ ಗಮನವಿಟ್ಟು ನೋಡಿದರೆ ಇದು ಸ್ಪಷ್ಟವಾಗುತ್ತದೆ,ಹಾಗೂ ಇಲ್ಲಿನ ಪೋಲೀಸರ ನಿಜ ಬಣ್ಣ ಬಯಲಾಗುತ್ತದೆ. ಸಂಘ ಪರಿವಾರದವರೇ ಅಲ್ಲಿದ್ದ ಯುವತಿಯರನ್ನು ಅಟ್ಟಾಡಿಸಿ ಬಳಿಕ ಅಲ್ಲಿನ ಪೊಲೀಸರಿಗೆ ಆ ಯುವತಿಯರನ್ನು ಕೈಯಾರೆ ಒಪ್ಪಿಸುವಾಗ ಅಲ್ಲಿದ್ದ ಪೊಲೀಸರು ಆ ಚೆಡ್ಡಿ ಪಡೆಗಳನ್ನು ಬಂಧಿಸಲೇ ಇಲ್ಲ. ಯಾಕೆಂದರೆ ಮಂಗಳೂರಿನಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು. ಅಲ್ಲಿಗಾಗಮಿಸುವ  ಪೊಲೀಸರೇ ಚೆಡ್ಡಿ ಪಡೆಗಳ ಜತೆಗೆ ಸೇರಿ ತಾವೂ  ಧರ್ಮ ಸಂರಕ್ಷಕರಾಗುತ್ತಾರೆ.ಇಂತಹ ಘಟನೆಗಳಲ್ಲಿ ಪೊಲೀಸರೂ ಯುವತಿಯರನ್ನು ಸ್ಟೇಶನ್ ಗೆ ಕೊಂಡೊಯ್ದು ಹಲ್ಲೆಯನ್ನೂ  ಮಾಡುತ್ತಾರೆ. ಇದು ಮಂಗಳೂರಿನ ಪೋಲೀಸರ ಸ್ಟೈಲು .ಇಂತಹ ಪ್ರಕರಣದಲ್ಲಿ ರಕ್ಷಕರಾಗಬೇಕಾದವರೇ ರಾಕ್ಷಸರಾಗುತ್ತಾರೆ.
ಮಂಗಳೂರಿನ ಈ ನೈಜ್ಯ ಘಟನೆಗಳು ಹೊರ ಜಗತ್ತಿಗೆ ತಿಳಿಯುವುದು ವಿರಳಾತಿ ವಿರಳ.ಮೊದಲು ಅವರು ಮುಸ್ಲಿಮರನ್ನು ಹೊಡೆದರು.ಬಳಿಕ ಅವರು ಯೇಸು ಕ್ರಿಸ್ತನ ಶಿಲುಬೆಯನ್ನು ಮುರಿದರು,.ಈಗ ಅವರು ಹಿಂದೂಗಳ ಯುವತಿಯರನ್ನು ಅಟ್ಟಾಡಿಸ ತೊಡಗಿದ್ದಾರೆ. ಸರಕಾರ ಯಾವುದೇ ಬರಲಿ.ಅದು ಇಲ್ಲಿ ಪ್ರಶ್ನೆ ಇಲ್ಲ..ಇಲ್ಲಿ ಪೊಲೀಸರು ಇವರನ್ನು ನೇರವಾಗಿ ಬೆಂಬಲಿಸುತ್ತಾರೆ. ಮಫ್ತಿಯಲ್ಲಿ ಆಗಮಿಸುವ ಕೆಲವು ಪೊಲೀಸರು ಹಲ್ಲೆಕೊರರಾಗುತ್ತಾರೆ.ಎಲ್ಲಿಯ ವರೆಗೆ ಇಲ್ಲಿನ ಪೋಲಿಸ್ ಇಲಾಖೆ ಸುಧಾರಿಸುವುದಿಲ್ಲವೋ ಅಲ್ಲಿಯ ತನಕ ಇದು  ಇದ್ದೆ  ಇರುತ್ತದೆ.ಪಬ್ ಧಾಳಿ ಬಳಿಕವೂ ಅದಕ್ಕಿಂತಲೂ ಭಯಾನಕ ವಾದ ಘಟನೆ ಇಲ್ಲಿ ನಡೆದಿದೆಯೆಂದರೆ ಇದು ಇಲ್ಲಿಗೆ ಮುಕ್ತಾಯಗೊಂದೀತು ಎಂದು ತಿಳಿದು ಕೊಂಡರೆ ಮೂರ್ಖತನ ವಾದೀತು .2012 ಜನವರಿಯಲ್ಲಿ ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ "ದಿಕ್ಸೂಚಿ"ಭಾಷಣ ಮಾಡಿದ ಮಾನ್ಯ ಡಾ .ಕಲ್ಲಡ್ಕ ಪ್ರಭಾಕರ ಭಟ್ಟ ಇಲ್ಲಿನ "ಹಿಂದೂ"ಯುವಕರಿಗೆ ಕರೆ ನೀಡಿದ್ದನ್ನೇ ಮೊನ್ನೆ ಮಂಗಳೂರಿನ ಹೋಂ ಸ್ಟೇ ಯಲ್ಲಿ ಹಿಂದೂ ಜಾಗರಣ ವೇದಿಕೆಯವರು ಮಾಡಿದ್ದು.ಹಾಗಿರುವಾಗ ಈಗ ಒಮ್ಮೆಗೆ ಆ ಯುವಕರನ್ನು ಬಂಧಿಸಿರಬಹುದು. ಆದರೆ ಕಲ್ಲಡ್ಕ ಭಟ್ಟರ ಕರೆಗೆ ಓಗೊಟ್ಟವರನ್ನು ಭಟ್ಟರಿಗೆ ರಕ್ಷಿಸಲೇ ಬೇಕು.ಹಾಗಿರುವಾಗ ಈ ಕೇಸಿನಲ್ಲಿ ಯಾವತ್ತೂ ತೀರ್ಪು ಬರಲಿಕಿಲ್ಲ  ಕಲ್ಲಡ್ಕ ಭಟ್ಟರು ಅಂದು ಹೇಳಿದ್ದು " ಹೊಡೆಯಿರಿ, ಕೇಸು ಆದ್ರೆ ನಾನು ಜಾಮೀನು  ತೆಗೆಸಿ ಕೊಡ್ತೇನೆ, ಯಾವ ಹುಡುಗಿಯರು ಸೀರೆ  ಸುತ್ತುವುದಿಲ್ಲವೋ,ಎಲ್ಲಿ ಬಿಂದಿ ಧರಿಸುವುದಿಲ್ಲವೋ, ಎಲ್ಲಿ ಮುಸಲ್ಮಾನರ ಜತೆ ಓಡಾಡುತ್ತಾರೋ ಅಲ್ಲೆಲ್ಲ ಹೊಡೆಯಿರಿ, ಹಿಂದೂ ಸಂಸ್ಕೃತಿಯನ್ನು ರಕ್ಷಣೆ ಮಾಡಿ, ಅದಕ್ಕೋಸ್ಕರ ಜೈಲಿಗೂ ಹೋಗಲು ಸಿದ್ದರಾಗಿ, ಎಲ್ಲಿಯವರೆಗೆ ನಾವು ಇದನ್ನೆಲ್ಲಾ ಮಾಡುವುದಿಲ್ಲವೋ ಅಲ್ಲಿಯ ತನಕ ನಮ್ಮ ಹುಡುಗಿಯರನ್ನು  "ಅವರು" ಬುಟ್ಟಿಗೆ ಹಾಕುತ್ತಲೇ ಇರುತ್ತಾರೆ, ಮತಾಂತರ ಮಾಡುತ್ತಲೇ ಇರುತ್ತಾರೆ..ಯಾಕೆ ಸುಮ್ಮನಿದ್ದೀರಿ ಯುವಕರೇ ನೀವು, ನೀವು ನಿದ್ರಿಸುತ್ತಲೇ ಇದ್ದೀರಾ, ಏಳಿ, ಎದ್ದೇಳಿ, ಧರ್ಮವನ್ನು ರಕ್ಷಿಸಿ, ಎಲ್ಲಿಯ ತನಕ ನಮ್ಮ ಮಹಿಳೆಯರು ಸರಿದಾರಿಗೆ ಬರುವುದಿಲ್ಲವೋ ಅಲ್ಲಿಯ ತನಕ ನಮಗೆ ಉಳಿಗಾಲವಿಲ್ಲ....." ಇಂತಹ ತಾಲಿಬಾನಿ ಮುಖಂಡರು ಈ ಸಮಾಜದಲ್ಲಿದ್ದಾರೋ ಅಲ್ಲಿಯ ತನಕ ಈ "ಘಟನೆ" ನಡೆಯುತ್ತಲೇ ಇರುತ್ತವೆ.ಹಾಗಿರುವಾಗ ಮಂಗಳೂರಿನ ಸಾಮಾನ್ಯ ಜನತೆಗೆ, ಅದರಲ್ಲೋ ಮಹಿಳೆಯರಿಗೆ ಮಂಗಳೂರಿನಲ್ಲಿ ಹುಟ್ಟಿದ ಏಕೈಕ ಕಾರಣಕ್ಕೆ ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟನಂತವರು ಇಲ್ಲಿ ಹುಟ್ಟಿದ ಕಾರಣಕ್ಕೆ ಈ "ದಾಳಿ"ಗಳೂ ನಡೆಯುತ್ತಲೇ ಇರುತ್ತವೆ. ಹಿಂದೂ ಸಂಸ್ಕೃತಿಯ, ಹಿಂದೂ ಧರ್ಮದ ರಕ್ಷಣೆಗೆ...ಕೊನೆಯದಾಗಿ ನಾನು ಇಲ್ಲಿ ಹೇಳೋದಿಷ್ಟೇ... "ಮನುಷ್ಯರನ್ನು ಬದುಕಲು ಬಿಡದ ಈ ಧರ್ಮಕ್ಕೊಂದಿಷ್ಟು...!"