VORKADI
HARSHAD VORKADY
Saturday, December 19, 2015
Saturday, July 4, 2015
Friday, December 13, 2013
ಕಾಸರಗೋಡು ....
----------------------------
ಕೊಲ್ಲುವರಿಲ್ಲಿ ಯುವಕರನ್ನು
ಅದು ಅವರಿಗೆ "ಮಜಾ" ಅಂತೆ ...
ಸಾಯುವವರಿಗೆ ಗೊತ್ತಿಲ್ಲ, ನಮ್ಮನ್ನು ಯಾಕೆ ಕೊಂದರು ಎಂದು
ಏನೂ ಗೊತ್ತಿಲ್ಲದೇ ಪಾಪ ಕೊಲ್ಲಲ್ಪಡುವವರು....
'ಆ'ಧರ್ಮದವರು 'ಈ' ಧರ್ಮದವರನ್ನು ಕೊಲ್ಲುವುದು
'ಈ' ಧರ್ಮದವರು 'ಅ'ಧರ್ಮದವರನ್ನು ಕೊಲ್ಲುವುದು
ಇಲ್ಲಿ ಮಾಮೂಲು ....
ಧರ್ಮಗಳಿಗೆ ಇಲ್ಲಿ ನಿರಂತರ ಬಲಿ ಅರ್ಪಣೆ ...
ಮನುಷ್ಯರನ್ನು ಬದುಕಲು ಬಿಡದ
ಈ ಧರ್ಮಕ್ಕೆ 'ಥೂ' .. !
-ಹರ್ಷಾದ್ ವರ್ಕಾಡಿ
----------------------------
ಕೊಲ್ಲುವರಿಲ್ಲಿ ಯುವಕರನ್ನು
ಅದು ಅವರಿಗೆ "ಮಜಾ" ಅಂತೆ ...
ಸಾಯುವವರಿಗೆ ಗೊತ್ತಿಲ್ಲ, ನಮ್ಮನ್ನು ಯಾಕೆ ಕೊಂದರು ಎಂದು
ಏನೂ ಗೊತ್ತಿಲ್ಲದೇ ಪಾಪ ಕೊಲ್ಲಲ್ಪಡುವವರು....
'ಆ'ಧರ್ಮದವರು 'ಈ' ಧರ್ಮದವರನ್ನು ಕೊಲ್ಲುವುದು
'ಈ' ಧರ್ಮದವರು 'ಅ'ಧರ್ಮದವರನ್ನು ಕೊಲ್ಲುವುದು
ಇಲ್ಲಿ ಮಾಮೂಲು ....
ಧರ್ಮಗಳಿಗೆ ಇಲ್ಲಿ ನಿರಂತರ ಬಲಿ ಅರ್ಪಣೆ ...
ಮನುಷ್ಯರನ್ನು ಬದುಕಲು ಬಿಡದ
ಈ ಧರ್ಮಕ್ಕೆ 'ಥೂ' .. !
-ಹರ್ಷಾದ್ ವರ್ಕಾಡಿ
Tuesday, January 22, 2013
ನನಗೊಂದಿಷ್ಟು ಮರು ಜೀವ ನೀಡಿ...!
- ಹರ್ಷಾದ್ ವರ್ಕಾಡಿ
ಹಳೆ ಸ್ಮಶಾನವದು...ಹಳೇ ಗೋರಿಗಳವು ....
ಸ್ಮಶಾನದೊಳಗೆ ಸ್ಮಾರಕವಾಗದ ಗೋರಿಯ ಮುಂದೆ ಎರಡೂ ಕೈಗಳನ್ನು ಹಿಡಿದು ಸುಮ್ಮನೆ ನಿಂತಿದ್ದೇನೆ...ಸ್ಮಶಾನವೆಂದರೆ ಅಲ್ಲಿ ವಿಚಿತವಾದ ವಾಸನೆ ಇರಬೇಕಲ್ಲಾ? ಆದ್ರೆ ಅಲ್ಲಿ ವಾಸನೆಯೂ ಇಲ್ಲ, ಅಗರಬತ್ತಿಯ ಪರಿಮಳವೂ ಇಲ್ಲ..ದತ್ತ ಮರಗಳಿವೆ.ಕಪ್ಪು ನೆರಳೂ ಇದೆ. ಜತೆಗೆ ಬೆಳದಿಂಗಳ ಬೆಳಕು ಧಾರಾಳ ಇದೆ..ತರಗೆಲೆಗಳಿಗೇನೂ ಕಮ್ಮಿಯಿರಲಿಲ್ಲ..ಸಿಮೆಂಟು ಹಾಸಿದ ಗೋರಿಯ ಮೇಲೆ ತರಗೆಲೆಗಳೂ ಹಾಯಾಗಿ ಬಿದ್ದಿದೆ..
ಅದೊಂದು ಸ್ಮಶಾನ...ಅಲಿ ತಲೆಬುರುಡೆ ಇರಲಿಲ್ಲ..ಯಾಕೆಂದರೆ ಅದು ಹಳೆ ಸ್ಮಶಾನ.ರುದ್ರಭೂಮಿಯೂ ಅದೇ..ಆದರೆ ಕೆಲ ವರ್ಷಗಳಿಂದ ಅಲ್ಲಿ ಯಾರೂ ಹೊಸಬ್ಬರನ್ನು ಹೂಳಲಿಲ್ಲ.ರಾತ್ರಿಯಾದರೂ ಬೆಳದಿಂಗಲಿದ್ದುದರಿಂದ ನನಗೆ ಹೆದರಿಕೆಯಾಗಲಿಲ್ಲ.. ಯಾಕೆಂದರೆ ಹಳೆ ಸ್ಮಶಾನದಲ್ಲಿ ಬಹುಷ: ಪ್ರೇತಗಳಿರಲಿಕ್ಕಿಲ್ಲ ..ಪ್ರೇತಗಳೂ ಸತ್ತಿರಬಹುದು...ಇಲ್ಲವೇ ಹೊಸಬ್ಬರೂ ಯಾರೂ ಬರದೇ ಇದ್ದಾರೆ ಪ್ರೇತಗಳೂ ವಲಸೆ ಹೋಗಿರಬಹುದು..ಗೂಬೆ ಕರಿಬೆಕ್ಕು ಕೂಡ ಇರಲಿಲ್ಲ... 'ಸತ್ತ ಮನುಷ್ಯರನ್ನು ಹೂಳುವ, ಸುಡುವ ಜಾಗವನ್ನು ಸ್ಮಶಾನವೆನ್ನುತ್ತೇವೆ' ಎನ್ನುವ ವಾಕ್ಯ ನನ್ನ ಕಿವಿಯೊಳಗೆ ಮಾರ್ದನಿಸಿತು..
ಈ ದೇವರ ಮೇಲೆ ನಂಬಿಕೆ ಇಟ್ಟವರು ಸ್ಮಶಾನ ,ಗೋರಿಗಳಿಗೆ ಹೆದರುತ್ತಾರೆ..ಯಾಕೆಂದರೆ ಸತ್ತವರು ಇನ್ನೂ ಅಲ್ಲಿಯೇ ಮಲಗಿರುತ್ತಾರೆನ್ನುವ ಭ್ರಮೆಯಿಂದ...
ನಿದ್ರಾರಹಿತ ರಾತ್ರಿಯಲ್ಲಿ ನಾನು ಆ ಕತ್ತಲನ್ನು ಸೀಳಿ ಒಂಟಿಯಾಗುತ್ತೇನೆ..
ಸ್ಮಶಾನದಲ್ಲಿ ಹಾವು ಸುಳಿದಾಡುವುದಿಲ್ಲವೆಂದು ಯಾರೋ ಹೇಳಿದ್ದು ನೆನಪಾಯಿತು..
ದೂರದಿಂದ ತೋಳಗಳ ವಿಷಣ್ಣ ಕೂಗು ಕೇಳಿ ಬರುತ್ತಿತ್ತು.
ದಿನದ ತೊಂದರೆ ,ಜಗಳ, ದುಡಿಮೆ,ಕಲಹವನ್ನು ಮುಗಿಸಿ ಜೀವಂತ ಮನುಷ್ಯರೂ ಅಂದು ರಾತ್ರಿ ಪ್ರಾರ್ಥನೆಯೊಂದಿಗೆ ಮಲಗಿ ನಿದ್ರಿಸುತ್ತಾರೆ.ಜಗತ್ತೇ ನಿದ್ರಿಸತೊಡಗುತ್ತದೆ... ನಿದ್ರಾ ಲೋಕ ...ಆದರೆ ಸ್ಮಶಾನದಲ್ಲಿ ನಿದ್ದೆಯ ಪುನರಾವರ್ತನೆಯಿಲ್ಲ ...ಅದು ಶಾಶ್ವತವಾದ ನಿದ್ದೆ...ಅಲ್ಲಿ ಮಲಗಲು ಸಂಪನ್ನರಾದವವರು ಮೊದಲೇ ದುಡ್ಡು ಕೊಟ್ಟು ಸ್ಥಳ ಕಾಯ್ದಿರಿಸುತ್ತಾರೆ..ಕೆಲವರಿಗೆ ಅದೂ ಇಲ್ಲ..ಮುಕ್ತವಾಗಿ ಮಲಗುವ ಅವಕಾಶ...ಮುಕ್ತವಾದ ಸ್ವಾತಂತ್ರ್ಯ ...
ಹಕ್ಕಿಗಳಿಗೆ ಸ್ಮಶಾನವಿಲ್ಲ...ಈ ಹಕ್ಕಿಗಳು ಸತ್ತು ಕೆಳ ಬೀಳುವುದನ್ನು ನಾನು ಕಂಡಿಲ್ಲ...ಮಹಾ ಯುದ್ಧದಲ್ಲಿ ಸತ್ತವರಿಗೆ ಸ್ಮಶಾನವೇ ಸುಖ..
ದೂರದಲ್ಲೆಲ್ಲೋ ನಿಂತು ಸ್ಮಶಾನ , ಗೋರಿಗಳನ್ನು ಹೀಯಾಳಿಸಬೇಡಿ.. ನಿಮಗರಿವಿಲ್ಲದಂತೆ ನಿಮ್ಮನ್ನು ಹೊತ್ತು ತಂದು ಹಾಕುತ್ತಾರೆ..
ಮತ್ತೆ ಅದೇ ಅಗರಬತ್ತಿ..ಹೂಗುಚ್ಛ..ಕುರುಚಲು ಗಿಡದ ಗೆಲ್ಲುಗಳು..ಗುಂಡಿಯೊಳಗೆ ಮಲಗಿಸಿ ಮಣ್ಣು ಹಾಕುತ್ತಾರೆ.ಕೆಲವರನ್ನು ಸುಡುತ್ತಾರೆ...ಸಿಮೆಂಟು ಸವರಿ ತೆರಳುತ್ತಾರೆ..ಅಲ್ಲಿಗೆ ಅವರ ಡ್ಯೂಟಿ ಮುಗಿಯಿತು..ಸತ್ತವರದ್ದು ಮತ್ತು ಹೂತವರದ್ದು...ಈ ಜಗತ್ತೇ ಹಾಗೆ..ಹೆಣ್ಣು ನೋಡಿ ಉಗುಳು ನುಂಗುತ್ತಾರೆ..ಹಣ್ಣು ನೋಡಿ ಬಾಯಿ ಚಪ್ಪರಿಸುತ್ತಾರೆ...ಸ್ಮಶಾನ ನೋಡಿ ಯಾರೂ ಸಾಯಬಯಸುವುದಿಲ್ಲ..ಯಾಕೆಂದರೆ ಸ್ಮಶಾನದಲ್ಲಿ ಪ್ರೇತಗಳಿವೆಯಂತೆ ...ಭಯ..
ಸ್ಮಶಾನದೊಳಗೆ ಅದೊಂದು ಸಮಾಧಿ ಬಲಿ ಕೂತೆ...
ಎಡ್ವರ್ಡ್ ಬ್ಲೇರ್ ಜನನ : 20&08&1817 ನಿಧನ :18&01&1862
ಮೇಲಿನ ದಿನಾಂಕ ಬರೆದಿರುವುದು ಸತ್ತವರಿಗೆ ಓದಲಿಕ್ಕಲ್ಲ..ಸಾಯಲಿಕ್ಕಿರುವವರಿಗೆ...ಅರ್ಥಾತ್ ಅದನ್ನು ಓದುವವರಿಗೆ..ಇದೀಗ ನನಗೆ..
ನಾನು ಸತ್ತರೆ ನನ್ನ ಸಮಾಧಿಯನ್ನು ಎತ್ತರಕ್ಕೆರಿಸಿ ಕಟ್ಟಬೇಕು...ಮಳೆ ನೀರು ಒಳ ನುಗ್ಗದಂತೆ...
ಯಾರಾದರೂ ಹೂವು ಚೆಲ್ಲಬಹುದು...
ಇನ್ನು ಕೆಲವರೋ ಮೋಂಬತ್ತಿ ಉರಿಸಬಹುದು..
ಕೆಲವರು ಕಣ್ಣೀರು ಸುರಿಯಬಹುದು..
..ಪ್ಲೀಸ್ ಆವಾಗ ನನಗೊಂದಿಷ್ಟು ಮರುಜೀವ ನೀಡು ಒಡೆಯನೇ ..ಅವರಿಗೊಂದು ಥ್ಯಾಂಕ್ಸ್ ಹೇಳಲು.
Monday, July 30, 2012
ಮಂಗಳೂರಿನ ತಾಲಿಬಾನಿಗಳು...!
* ಹರ್ಷಾದ್ ವರ್ಕಾಡಿ , ಪತ್ರಕರ್ತ
vorkady@gmail.com
ಮಂಗಳೂರಿನ ಹೋಂ ಸ್ಟೇ ಯಲ್ಲಿ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆ ಧಾಳಿ ಮಾಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಲ್ಲಿದ್ದ ಯುವತಿಯರನ್ನು ಅಟ್ಟಾಡಿಸಿ ಹಲ್ಲೆ ಮಾಡಿದ ಭಯಾನಕ ರೌದ್ರ ತಾಂಡವ ದೃಶ್ಯವನ್ನು ಇಡೀ ಜಗತ್ತೇ ನೋಡಿದೆ.ಧಾಳಿ ಮಾಡುವ ಸಂಧರ್ಭದಲ್ಲಿ ಹಿಂದೂ ಧರ್ಮ, ಸಂಸ್ಕೃತಿ ಸಂರಕ್ಷರ ಭಾಷೆಯನ್ನು ಬಹುಶ ತುಳುವರು ಮಾತ್ರವೇ ಅರ್ಥೈಸಿಕೊಳ್ಳಲು ಸಾಧ್ಯ.ಅದು ಅರ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟನ ಭಾಷೆ.ಇಲ್ಲಿ ಧಾಳಿ ಮಾಡಿ, ಅಲ್ಲಿದ್ದ ಯುವತಿಯರ ಮಾನಭಂಗ(!) ಮಾಡಿದವರೆಲ್ಲರೂ ಕೀಳು ವರ್ಗದವರು.ಅಂದರೆ ಸಾಮಾಜಿಕ ಭಾಷೆಯಲ್ಲಿ ಮೂರನೇ ದರ್ಜೆಯವರು.ಇಂತಹ ಘಟನೆಗಳು ಮಂಗಳೂರಿನಲ್ಲಿ ಸರ್ವೇ ಸಾಮಾನ್ಯ.ಮಂಗಳೂರಿನ ಹೋಂ ಸ್ಟೇ ಪ್ರಕರಣ ಕ್ಯಾಮೆರಾ ಮುಂದೆ ನಡೆದು, ಚಾನೆಲುಗಳಲ್ಲಿ ಬಿತ್ತರಿಸಿದ ಮಾತ್ರಕ್ಕೆ "ಭಯಾನಕ' ರೂಪವನ್ನು ಪಡೆದಿದೆ.ಕ್ಯಾಮೆರಾ ಚಿತ್ರೀಕರಣ ನಡೆಯುತ್ತಿದೆ ಎಂಧು ಅರಿತ ಹಿಂದೂ ಧರ್ಮ ಪಡೆಗಳು ಮಾಡಿದ ರೀತಿಯನ್ನು ನೋಡಿದ ಮೇಲೆ ಕ್ಯಾಮೆರಾ ಇಲ್ಲದ ಕಡೆ ಅವರ ಭಯಾನಕತೆಯನ್ನು ಊಹಿಸಿ ನೋಡಿ? ಇತ್ತೇಚೆಗೆ ಓರ್ವ ಮುಸ್ಲಿಂ ಹುಡುಗನ ಜತೆ ಇದ್ದ ಹಿಂದೂ ಹುಡುಗಿ ಯನ್ನು ಸಂಸ್ಕೃತಿಯ ಹೆಸರಿನಲ್ಲಿ ಬೆನ್ನಟ್ಟಿ ಹಿಡಿದ ಈ ತಾಲಿಬಾನಿಗಳು ಆ ಇಬ್ಬರ ಮೇಲೆ ಇದೆ ರೀತಿಯಲ್ಲಿ ಹಲ್ಲೆ ಮಾಡಿ, ಬಳಿಕ ಯುವತಿಯನ್ನು ಅಲ್ಲಿಂದ ಹೊತ್ತೊಯ್ದು ಬಳಿಕ ಮಾಡುವುದನ್ನೆಲ್ಲ ಸಾಮೂಹಿಕವಾಗಿ ಮಾಡಿದ್ದು ,ಭಯದಿಂದ ಆ ಹುಡುಗಿ ಈ ಘಟನೆಯನ್ನು ಯಾರಲೂ ಹೇಳಿಲ್ಲ. ಇಂತಹ ಘಟನೆಗಳು ಅದೆಷ್ಟೋ ನಡೆದರೂ ರಹಸ್ಯವಾಗಿಯೇ ಉಳಿಯುತ್ತವೆ. " ನಿಕ್ಕ್ ಬ್ಯಾರಿ ಆಪುಂದಾ? ಯಾನ್ ಆವಂದ?" (ನಿನಗೆ ಬ್ಯಾರಿ ಮಾತ್ರ ಆಗೋದಾ? ನಾನು ಆಗೋದಿಲ್ವ?) ಅಂತ ಹೇಳಿ ಆ ಯುವತಿಯನ್ನು ಬಳಿಕ ತಾವೇ ಸಾಮೂಹಿಕವಾಗಿ ಬಳಸುತ್ತಾರೆ...ಇಂತಹ ಪ್ರಕರಣದಲ್ಲಿ ಪೊಲೀಸರಲ್ಲಿ ಕಂಪ್ಲೇಂಟ್ ಕೊಟ್ಟರೆ ಪರಿಸ್ಥಿತಿ ಅದಕ್ಕಿಂತ ಭಾಯಾನಕವಾಗುತ್ತದೆ,ಯಾಕೆಂದರೆ ಪೋಲಿಸ್ ಇಲಾಖೆಯಲ್ಲಿಯೂ ಇಂತಹ ಮಂದಿ ನುಸುಳಿಕೊಂಡಿದ್ದು, ಅವರೂ ಇದೆ ಪ್ರಶ್ನೆಯನ್ನು ಅವರಲ್ಲಿ ಹಾಕ್ತಾರೆ.ಈ ಘಟನೆಗಳನ್ನು ಮೊಬೈಲುಗಳಲ್ಲಿ ಚಿತ್ರೀಕರಿಸಿ ಬಳಿಕ ಆ ಯುವತಿಯರನ್ನು ಬ್ಲಾಕ್ ಮೇಲ್ ಮಾಡುತ್ತಾರೆ.ಮಂಗಳೂರಿನ ಭಾಷೆಯಲ್ಲಿ ಹೇಳೋದಾದರೆ ಇದು "ಮಾಮೂಲು" ಸಂಗತಿ,ಇಲ್ಲಿ ಮಾಮೂಲು ಎಂಬ ಪದಕ್ಕೆ ಎರಡು ಅರ್ಥಗಳಿವೆ. ಒಂದು ಮಾಮೂಲು ಅಂದರೆ ಸರ್ವೆ ಸಾಮಾನ್ಯ. ಇನ್ನೊಂದು ಮಾಮೂಲು ಅಂದ್ರೆ "ಹಫ್ತಾ"ಎಂಬ ಅರ್ಥ ಬರುತ್ತದೆ. ಇಲ್ಲಿ ಸಂಘ ಪರಿವಾರದ ವಿವಿಧ ಬ್ರಾಂಚ್ ಗಳಿಗೆ ಮಾಮೂಲು ಕೊಟ್ಟರೆ ಮತ್ತೆ ಧರ್ಮ, ಸಂಸ್ಕೃತಿಯ ಸಮಸ್ಯೆಯಿಲ್ಲ.ಅದರ ಪೇಟೆಂಟ್ ಇವರು ಕೊಡುತ್ತಾರೆ..ಗೋ ಸಾಗಾಟ ದಾರರು ಮಾಮೂಲು ಕೊಟ್ಟರೆ ಇದೆ ಭಜರಂಗಿಗಳು ಸಾಗಾಟ ದಾರರಿಗೆ ಸೆಕ್ಯುರಿಟಿ ಕೊಡುತ್ತಾರೆ.ಕೇವಲ ತೋಳು ಬಲವನ್ನು ಉಪಯೋಗಿಸಿಕೊಂಡು ಯುವತಿಯರನ್ನು ಅಟ್ಟಾಡಿಸುವ ಇಲ್ಲಿನ ಹಿಂದೂ ತಾಲಿಬಾನಿಗಳಿಂದಾಗಿ ಕಳೆದ ಒಂದು ದಶಕದಲ್ಲಿ ಅದೆಷ್ಟೋ ಯುವತಿಯರು ಮಾನಕ್ಕೆ ಅಂಜಿ, ಭಯಗೊಂಡು ಆತ್ಮ ಹತ್ಯೆ ಮಾಡಿದ್ದಾರೆ. ಇನ್ನು ಅದೆಷ್ಟೋ ಯುವತಿಯರು ಮಾನಸಿಕ ಅಸ್ವಸ್ಥ ರಾಗಿದ್ದಾರೆ. ಮಂಗಳೂರಿನಲ್ಲಿ ಇಂತಹ ಯುವಕರು ಮಾತ್ರವಲ್ಲ, ಇಲ್ಲಿನ ಇಡೀ ಮಂಗಳೂರಿನ ವ್ಯವಸ್ಥೆಯೇ ಹಾಗಾಗಿದೆ.ಯಾವುದೇ ಇಲಾಖೆಯನ್ನು ಬೇಕಾದರೆ ಕೈಗೆತ್ತಿಕೊಳ್ಳಿ. ಎಲ್ಲಾ ಕಡೆಯೂ ಇದೆ ತೆರನಾದ "ಧರ್ಮ ರಕ್ಷಣೆ"ನಡೆಯುತ್ತಲೇ ಇರುತ್ತದೆ. ಮಂಗಳೂರಿನ ಮಟ್ಟಿಗೆ ಸ್ವಾತಂತ್ರ್ಯ , ಪ್ರಜಾಪ್ರಭುತ್ವ ಎಂಬುದು ಅಪರಿಚಿತ ಪದಗಳು. ಇಲ್ಲಿನ ಜಾತ್ರೆಗಳಿಗೆ ಮುಸಲ್ಮಾನರು ಹೋಗಕೂಡದು .ಮುಸ್ಲಿಂ ಹುಡುಗರ ಅಂಗಡಿಗೆ ತೆರಳಿ ಹಿಂದೂ ಹುಡುಗಿಯರು ಮೊಬೈಲಿಗೆ ರೀ ಚಾರ್ಜ್ ಮಾಡ ಬಾರದು ,ಮುಸ್ಲಿಮರ ಅಂಗಡಿಗಳಲ್ಲಿ ಹಿಂದೂ ಹುಡುಗಿಯರು ಕೆಲಸಕ್ಕೆ ನಿಲ್ಲಬಾರದು ಹೀಗೆ ಇವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರನ್ನು ಪ್ರಶ್ನಿಸುವ ಯಾರೇ ಆಗಲಿ ಅವರಿಗೂ ಇದೆ ಗತಿ. ಆದ್ರೆ ಮುಸಲ್ಮಾನರ ಅಂಗಡಿಗಳಲ್ಲಿ ಕೆಲಸಕ್ಕೆ ಹಿಂದೂ ಹುಡುಗಿಯರನ್ನು ಇದೆ ಹಿಂದೂ ಧರ್ಮ ರಕ್ಷಕರು ನೇಮಿಸುತ್ತಾರೆ. ಇವರಿಗೆ ಒಂದಿಷ್ಟು ಕಮಿಷನ್ ಕೊಡಬೇಕು ಅಷ್ಟೇ .(ಉದಾ: ಮಂಗಳೂರಿನ ಸಿಟಿ ಸೆಂಟರ್.).ಈ ಹಿಂದೆಲ್ಲ ಅಪಘಾನಿಸ್ಥಾನದಲ್ಲಿ ತಾಲಿಬಾನಿಗಳು ಧರ್ಮದ ಹೆಸರಿನಲ್ಲಿ ಮಾಡುವ ಅವಾಂತರ ಗಳ ಬಗ್ಗೆ ವಾರ್ತಾ ಮಾಧ್ಯಮಗಳಲ್ಲಿ ಓದಿ ತಿಳಿದಿದ್ದ ಮಂದಿಗೆ ಇದೀಗ ನಮ್ಮ ದೇಶದಲ್ಲೂ ಹೀಗೆ ಅದರ ನೇರ ದರ್ಶನವಾಗಿದೆ. ಅದೂ ಮಂಗಳೂರಿನಲ್ಲಿ ಅತೀ ಹೆಚ್ಚು ಎಂಬುದು ಇಲ್ಲಿನ ವಿಶೇಷ.
ಮಂಗಳೂರಿನ ಹೋಂ ಸ್ಟೇ ಪ್ರಕರಣದಲ್ಲಿ ಪೊಲೀಸರು ಮಂಗಳೂರಿನ ತಿರುಗಿ ಬೀಳಲು ಕೆಲವು ಕಾರಣಗಳಿವೆ . ಇಲ್ಲಿ ಪೋಲೀಸರ ಕಾರ್ಯಾಚರಣೆಯನ್ನು ನಾವು ಶ್ಲಾಘಿ ಸುವುದು ಅವರ ನೈತಿಕ ನಿಲುವಿನಿಂದ ಖಂಡಿತಾ ಅಲ್ಲ . ಇಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ ಕಸ್ತೂರಿ ಚಾನೆಲ್ ವರದಿಗಾರ ನವೀನ ಶೆಟ್ಟಿ ಸೂರಿಂಜೆ ಹಾಗೂ ಸಹಾಯಿ ಚಾನೆಲ್ ಕ್ಯಾಮೆರಮೆನ್ ಶರಣ್ ಮೇಲೆ ಕೇಸು ದಾಖಲಿಸಿದ್ದನ್ನು ನೋಡೋದಾದರೆ ಇದು ಸ್ಪಷ್ಟವಾಗುತ್ತದೆ . 2008 ರಲ್ಲಿ ಮಂಗಳೂರಿನ ಪಬ್ ಧಾಳಿಯಲ್ಲಿ ಯಾವ ಮಾಧ್ಯಮದವರ ಮೇಲೂ ಪೊಲೀಸರು ಕೇಸು ದಾಖಲಿಸಿರಲಿಲ್ಲ ಯಾಕೆ? . ಇಲ್ಲಿ ಇನ್ನೊಂದು ಅಂಶವನ್ನು ಗಮನಿಸುವುದಾದರೆ ಮೊನ್ನೆ ಅನ್ಯ ಕೋಮಿನ ಜೋಡಿ ಇದೆ ಎಂಬ ಗುಮಾನಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಲ್ಲಿಗೆ ಧಾಳಿ ಮಾಡಿದ್ದಾರೆ.ಇಲ್ಲಿ "ಅನ್ಯ ಕೊಮಿಯ ಜೋಡಿ"( ಇದು ಕರಾವಳಿಯ ಪತ್ರಿಕೆಗಳ ಸಾರ್ವತ್ರಿಕ ಪದ) ಇಲ್ಲದಿದ್ದಾಗ ಮತ್ತು ಇಡೀ ಮಂಗಳೂರಿನ ಜನ ಪ್ರತಿಭಟಿಸಿದಾಗ ಪೋಲೀಸರ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಲ್ಲಿದ್ದುದು ಶ್ರೀಮಂತರ ಮಕ್ಕಳು ಹಾಗೂ ಪ್ರಮುಖರ ಅಧಿಕಾರಿಗಳ ಮಕ್ಕಳು ಎಂಬ ಕಾರಣಕ್ಕೆ ಅದನ್ನು ಚಿತ್ರೀಕರಿಸಿದ ಮಾಧ್ಯಮದವರ ಮೇಲೆ ಮಂಗಳೂರಿನ ಪೋಲೀಸ್ ಆಯುಕ್ತ ತಿರುಗಿ ಬಿದ್ದಿದ್ದು ಎಂಬುದಕ್ಕೆ ಅನುಮಾನವಿಲ್ಲ. ಹೋಂ ಸ್ಟೇ ಗೆ ಆಗಮಿಸಿದ ಪೊಲೀಸರು ಅಲ್ಲಿನ ಹಿಂದೂ ಜಾಗರಣ ವೇದಿಕೆಯವರಿಗೆ ಯಾವುದೇ ಕಪಾಳ ಮೋಕ್ಷ ನಡೆಸಲಿಲ್ಲ, ಬದಲಿಗೆ ಅಲ್ಲಿ ಧರ್ಮ ಸಂರಕ್ಷಕರು ಹಿಡಿದು ಎರ್ರಾ ಬಿರ್ರಿ ಹೊಡೆದು ಕೊಟ್ಟ ಅದೇ ಅಮಾಯಕ ಯುವಕರಿಗೆ ಪೊಲೀಸರು ಮತ್ತೆ ಹೊಡೆದಿದ್ದಾರೆ. ಅಲ್ಲಿನ ವಿಡಿಯೋ ಗಳನ್ನೂ ಗಮನವಿಟ್ಟು ನೋಡಿದರೆ ಇದು ಸ್ಪಷ್ಟವಾಗುತ್ತದೆ,ಹಾಗೂ ಇಲ್ಲಿನ ಪೋಲೀಸರ ನಿಜ ಬಣ್ಣ ಬಯಲಾಗುತ್ತದೆ. ಸಂಘ ಪರಿವಾರದವರೇ ಅಲ್ಲಿದ್ದ ಯುವತಿಯರನ್ನು ಅಟ್ಟಾಡಿಸಿ ಬಳಿಕ ಅಲ್ಲಿನ ಪೊಲೀಸರಿಗೆ ಆ ಯುವತಿಯರನ್ನು ಕೈಯಾರೆ ಒಪ್ಪಿಸುವಾಗ ಅಲ್ಲಿದ್ದ ಪೊಲೀಸರು ಆ ಚೆಡ್ಡಿ ಪಡೆಗಳನ್ನು ಬಂಧಿಸಲೇ ಇಲ್ಲ. ಯಾಕೆಂದರೆ ಮಂಗಳೂರಿನಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು. ಅಲ್ಲಿಗಾಗಮಿಸುವ ಪೊಲೀಸರೇ ಚೆಡ್ಡಿ ಪಡೆಗಳ ಜತೆಗೆ ಸೇರಿ ತಾವೂ ಧರ್ಮ ಸಂರಕ್ಷಕರಾಗುತ್ತಾರೆ.ಇಂತಹ ಘಟನೆಗಳಲ್ಲಿ ಪೊಲೀಸರೂ ಯುವತಿಯರನ್ನು ಸ್ಟೇಶನ್ ಗೆ ಕೊಂಡೊಯ್ದು ಹಲ್ಲೆಯನ್ನೂ ಮಾಡುತ್ತಾರೆ. ಇದು ಮಂಗಳೂರಿನ ಪೋಲೀಸರ ಸ್ಟೈಲು .ಇಂತಹ ಪ್ರಕರಣದಲ್ಲಿ ರಕ್ಷಕರಾಗಬೇಕಾದವರೇ ರಾಕ್ಷಸರಾಗುತ್ತಾರೆ.
ಮಂಗಳೂರಿನ ಈ ನೈಜ್ಯ ಘಟನೆಗಳು ಹೊರ ಜಗತ್ತಿಗೆ ತಿಳಿಯುವುದು ವಿರಳಾತಿ ವಿರಳ.ಮೊದಲು ಅವರು ಮುಸ್ಲಿಮರನ್ನು ಹೊಡೆದರು.ಬಳಿಕ ಅವರು ಯೇಸು ಕ್ರಿಸ್ತನ ಶಿಲುಬೆಯನ್ನು ಮುರಿದರು,.ಈಗ ಅವರು ಹಿಂದೂಗಳ ಯುವತಿಯರನ್ನು ಅಟ್ಟಾಡಿಸ ತೊಡಗಿದ್ದಾರೆ. ಸರಕಾರ ಯಾವುದೇ ಬರಲಿ.ಅದು ಇಲ್ಲಿ ಪ್ರಶ್ನೆ ಇಲ್ಲ..ಇಲ್ಲಿ ಪೊಲೀಸರು ಇವರನ್ನು ನೇರವಾಗಿ ಬೆಂಬಲಿಸುತ್ತಾರೆ. ಮಫ್ತಿಯಲ್ಲಿ ಆಗಮಿಸುವ ಕೆಲವು ಪೊಲೀಸರು ಹಲ್ಲೆಕೊರರಾಗುತ್ತಾರೆ.ಎಲ್ಲಿಯ ವರೆಗೆ ಇಲ್ಲಿನ ಪೋಲಿಸ್ ಇಲಾಖೆ ಸುಧಾರಿಸುವುದಿಲ್ಲವೋ ಅಲ್ಲಿಯ ತನಕ ಇದು ಇದ್ದೆ ಇರುತ್ತದೆ.ಪಬ್ ಧಾಳಿ ಬಳಿಕವೂ ಅದಕ್ಕಿಂತಲೂ ಭಯಾನಕ ವಾದ ಘಟನೆ ಇಲ್ಲಿ ನಡೆದಿದೆಯೆಂದರೆ ಇದು ಇಲ್ಲಿಗೆ ಮುಕ್ತಾಯಗೊಂದೀತು ಎಂದು ತಿಳಿದು ಕೊಂಡರೆ ಮೂರ್ಖತನ ವಾದೀತು .2012 ಜನವರಿಯಲ್ಲಿ ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ "ದಿಕ್ಸೂಚಿ"ಭಾಷಣ ಮಾಡಿದ ಮಾನ್ಯ ಡಾ .ಕಲ್ಲಡ್ಕ ಪ್ರಭಾಕರ ಭಟ್ಟ ಇಲ್ಲಿನ "ಹಿಂದೂ"ಯುವಕರಿಗೆ ಕರೆ ನೀಡಿದ್ದನ್ನೇ ಮೊನ್ನೆ ಮಂಗಳೂರಿನ ಹೋಂ ಸ್ಟೇ ಯಲ್ಲಿ ಹಿಂದೂ ಜಾಗರಣ ವೇದಿಕೆಯವರು ಮಾಡಿದ್ದು.ಹಾಗಿರುವಾಗ ಈಗ ಒಮ್ಮೆಗೆ ಆ ಯುವಕರನ್ನು ಬಂಧಿಸಿರಬಹುದು. ಆದರೆ ಕಲ್ಲಡ್ಕ ಭಟ್ಟರ ಕರೆಗೆ ಓಗೊಟ್ಟವರನ್ನು ಭಟ್ಟರಿಗೆ ರಕ್ಷಿಸಲೇ ಬೇಕು.ಹಾಗಿರುವಾಗ ಈ ಕೇಸಿನಲ್ಲಿ ಯಾವತ್ತೂ ತೀರ್ಪು ಬರಲಿಕಿಲ್ಲ ಕಲ್ಲಡ್ಕ ಭಟ್ಟರು ಅಂದು ಹೇಳಿದ್ದು " ಹೊಡೆಯಿರಿ, ಕೇಸು ಆದ್ರೆ ನಾನು ಜಾಮೀನು ತೆಗೆಸಿ ಕೊಡ್ತೇನೆ, ಯಾವ ಹುಡುಗಿಯರು ಸೀರೆ ಸುತ್ತುವುದಿಲ್ಲವೋ,ಎಲ್ಲಿ ಬಿಂದಿ ಧರಿಸುವುದಿಲ್ಲವೋ, ಎಲ್ಲಿ ಮುಸಲ್ಮಾನರ ಜತೆ ಓಡಾಡುತ್ತಾರೋ ಅಲ್ಲೆಲ್ಲ ಹೊಡೆಯಿರಿ, ಹಿಂದೂ ಸಂಸ್ಕೃತಿಯನ್ನು ರಕ್ಷಣೆ ಮಾಡಿ, ಅದಕ್ಕೋಸ್ಕರ ಜೈಲಿಗೂ ಹೋಗಲು ಸಿದ್ದರಾಗಿ, ಎಲ್ಲಿಯವರೆಗೆ ನಾವು ಇದನ್ನೆಲ್ಲಾ ಮಾಡುವುದಿಲ್ಲವೋ ಅಲ್ಲಿಯ ತನಕ ನಮ್ಮ ಹುಡುಗಿಯರನ್ನು "ಅವರು" ಬುಟ್ಟಿಗೆ ಹಾಕುತ್ತಲೇ ಇರುತ್ತಾರೆ, ಮತಾಂತರ ಮಾಡುತ್ತಲೇ ಇರುತ್ತಾರೆ..ಯಾಕೆ ಸುಮ್ಮನಿದ್ದೀರಿ ಯುವಕರೇ ನೀವು, ನೀವು ನಿದ್ರಿಸುತ್ತಲೇ ಇದ್ದೀರಾ, ಏಳಿ, ಎದ್ದೇಳಿ, ಧರ್ಮವನ್ನು ರಕ್ಷಿಸಿ, ಎಲ್ಲಿಯ ತನಕ ನಮ್ಮ ಮಹಿಳೆಯರು ಸರಿದಾರಿಗೆ ಬರುವುದಿಲ್ಲವೋ ಅಲ್ಲಿಯ ತನಕ ನಮಗೆ ಉಳಿಗಾಲವಿಲ್ಲ....." ಇಂತಹ ತಾಲಿಬಾನಿ ಮುಖಂಡರು ಈ ಸಮಾಜದಲ್ಲಿದ್ದಾರೋ ಅಲ್ಲಿಯ ತನಕ ಈ "ಘಟನೆ" ನಡೆಯುತ್ತಲೇ ಇರುತ್ತವೆ.ಹಾಗಿರುವಾಗ ಮಂಗಳೂರಿನ ಸಾಮಾನ್ಯ ಜನತೆಗೆ, ಅದರಲ್ಲೋ ಮಹಿಳೆಯರಿಗೆ ಮಂಗಳೂರಿನಲ್ಲಿ ಹುಟ್ಟಿದ ಏಕೈಕ ಕಾರಣಕ್ಕೆ ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟನಂತವರು ಇಲ್ಲಿ ಹುಟ್ಟಿದ ಕಾರಣಕ್ಕೆ ಈ "ದಾಳಿ"ಗಳೂ ನಡೆಯುತ್ತಲೇ ಇರುತ್ತವೆ. ಹಿಂದೂ ಸಂಸ್ಕೃತಿಯ, ಹಿಂದೂ ಧರ್ಮದ ರಕ್ಷಣೆಗೆ...ಕೊನೆಯದಾಗಿ ನಾನು ಇಲ್ಲಿ ಹೇಳೋದಿಷ್ಟೇ... "ಮನುಷ್ಯರನ್ನು ಬದುಕಲು ಬಿಡದ ಈ ಧರ್ಮಕ್ಕೊಂದಿಷ್ಟು...!"
Friday, June 8, 2012
ಎನ್ .ವೆಂಕಟೇಶ್ ರಾವ್
ನಂದಿ ಹೋದ ಗಾಂಧೀ ಹಣತೆ
ವರ್ಕಾಡಿಯ ಶಿಲ್ಪಿ : ಎನ್ . ವೆಂಕಟೇಶ್ ರಾವ್
ಹರ್ಷಾದ್ ವರ್ಕಾಡಿ | May 29, 2012
ಮಂಜೇಶ್ವರ : ಸೋಮವಾರದಂದು ನಿಧನ ಹೊಂದಿದ ಹಿರಿಯ ಗಾಂಧೀವಾದಿ ,ಸಮಾಜ ಸೇವಕ, ಮುತ್ಸದ್ಧಿ ಎನ್.ವೆಂಕಟೇಶ್ ರಾವ್(78) 'ವರ್ಕಾಡಿಯ ಶಿಲ್ಪಿ' ಎಂದೇ ಪ್ರಖ್ಯಾತಿ ಪಡೆದವರು. ವರ್ಕಾಡಿ ಎಂಬ ಊರನ್ನು ಅಗಾಧವಾಗಿ ಹಚ್ಚಿಕೊಂಡಿದ್ದ ಇವರು ಸುಮಾರು 20 ವರ್ಷಗಳ ಕಾಲ ಇಲ್ಲಿ ಗ್ರಾಮ ಸೇವಕರಾಗಿ ಜನಮನದಲ್ಲಿ ಪ್ರಿತಿ ಸೌಹಾರ್ದತೆಯ ಹಣತೆಯನ್ನು ಹಚ್ಚಿದವರು. ಬರಡು ಭೂಮಿಯಾಗಿದ್ದ ವರ್ಕಾಡಿಯನ್ನು ಸಂಪನ್ನಗೊಳಿಸಿದ್ದ ಕೀರ್ತಿ ವೆಂಕಟೇಶ್ ರಾವ್‌ರವರಿಗೇ ಸಲ್ಲಬೇಕು.
ಪಕ್ಕಾ ಗಾಂಧೀವಾದಿಯಾಗಿದ್ದ ವೆಂಕಟೇಶ್‌ರಾವ್ ತನ್ನ ಜೀವನದ ಕೊನೆಯ ಉಸಿರಿನ ತನಕವೂ ಗಾಂಧೀ ತತ್ವವನ್ನೇ ಉಸಿರನ್ನಾಗಿಸಿದ್ದರು. ಗಾಂಧೀ ಚಟುವಟಿಕೆಗಳೆಂದರೆ ಇವರಿಗೆ ಪಂಚಪ್ರಾಣ.ಕಳೆದ ತಿಂಗಳು ತಿರುವನಂತಪುರದಲ್ಲಿ ಜರುಗಿದ ಗಾಂಧೀ ಸ್ಮಾರಕ ನಿಧಿಯ ಕಾರ್ಯಕ್ರಮಕ್ಕೆ ವರ್ಕಾಡಿಯ ಯುವಕರನ್ನು ಸಂಘಟಿಸಿ ಕರೆದೊಯ್ದಿದ್ದು, ಇಳಿ ವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡುತ್ತಿದ್ದರು. ಗಾಂಧೀ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಯುವಕರನ್ನು ಸಜ್ಜುಗೊಳಿಸಬೇಕೆಂಬ ಕನಸು ಹೊತ್ತಿದ್ದ ವೆಂಕಟೇಶ್ ರಾವ್ ಇನ್ನು ನೆನಪು ಮಾತ್ರ.
ಸಮಾಜ ಸೇವೆ..
ವರ್ಕಾಡಿಯಲ್ಲಿ ಗ್ರಾಮಸೇವಕರಾಗಿ ಕರ್ತವ್ಯ ನಿರ್ವಹಿಸಲು ಬಂದಂದಿನಿಂದ 1993ರ ತನಕ ವರ್ಕಾಡಿ ನಿವಾಸಿಯಾಗಿದ್ದ ವೆಂಕಟೇಶ್ ರಾವ್ 'ವರ್ಕಾಡಿ' ಎಂಬ ಉರನ್ನು ಜಗತ್ತಿನ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದ್ದರು. 'ಧರ್ಮನಗರ' ಎಂಬ ಕಾಲನಿಯನ್ನು ಸೃಷ್ಟಿಸಿ, ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.1985ರಲ್ಲಿ ವರ್ಕಾಡಿಯಲ್ಲಿ ಕೃಷಿವಿಜ್ಞಾನ ಕೇಂದ್ರ ಪ್ರಾರಂಭಗೊಂಡಿದ್ದು, ವೆಂಕಟೇಶ್‌ರಾವ್‌ರವರ ಕೃಪಕಟಾಕ್ಷದಿಂದಲೇ ಎಂಬುದು ಅಕ್ಷರಶ: ಸತ್ಯ.ಅಂದಿನ ಮುಖ್ಯಮಂತ್ರಿಯಾಗಿದ್ದ ಕೆ.ಕರುಣಾಕರನ್ ಆ ಕೇಂದ್ರವನ್ನು ಉದ್ಘಾಟಿಸಿದ್ದರು. ವರ್ಕಾಡಿಯಲ್ಲಿ ಅನರ್ಟ್ ಸೌರ ಶಕ್ತಿ ಕೇಂದ್ರವನ್ನು ಪ್ರಾರಂಭಿಸುವಲ್ಲಿ ಅಹೋ ರಾತ್ರಿ ದುಡಿದು ಯಶಸ್ವಿಯಾಗಿದ್ದರು. ವರ್ಕಾಡಿ ಎಂಬ ಬರಡು ಭೂಮಿಯನ್ನು ಹಸಿರುಜನ್ಯವನ್ನಾಗಿಸಿದ ಇವರು ಈ ಪ್ರದೇಶದ ಜನರನ್ನು ಜಾತಿ,ಮತ,ಬೇಧವಿಲ್ಲದೆ ಸಂಘಟಿಸುವಲ್ಲಿ ತನ್ನ ಬದುಕಿನ ಬಹುಭಾಗವನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದರು. ವರ್ಕಾಡಿಗೆ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಇಲ್ಲಿನ ಕೃಷಿಕರ ಆರ್ಥಿಕ ಸಬಲೀಕರಣಕ್ಕೆ ನೆರವಾದರು.ವರ್ಕಾಡಿ ಗ್ರಾಮ ಕಲಾ ಸೇವಾ ಸಂಘವನ್ನು ಸ್ಥಾಪಿಸಿ ಈ ಪ್ರದೇಶದ ಯುವಕರನ್ನು ಒಗ್ಗೂಡಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಹುರಿದುಂಬಿಸಿದರು. 70ರ ದಶಕದಲ್ಲಿ ಇವರ ಸಾರಥ್ಯದಲ್ಲಿ ನಡೆಯುತ್ತಿದ್ದ 'ಸಾರ್ವಜನಿಕ ಶ್ರಿ ಸತ್ಯನಾರಾಯಣ ಪೂಜೆ' ಆ ಕಾಲದಲ್ಲಿಯೇ ಜಾತಿ, ಮತ, ಬೇಧವಿಲ್ಲದೇ ಎಲ್ಲರೂ ಪಾಲ್ಗೊಳ್ಳತ್ತಿದ್ದರು. ಅಸಹಾಯಕರಿಗೆ ಸದಾ ನೆರವಾಗುತ್ತಿದ್ದ ಇವರು ರಾಜಕೀಯ ರಂಗದಲ್ಲಿಯೂ ಸಕ್ರಿಯರಾಗಿದ್ದರು. ಮೂಲತ: ನೀಲೆಶ್ವರ ನಿವಾಸಿಯಾಗಿದ್ದು, 1960ರ ಕಾಲಘಟ್ಟದಲ್ಲಿ ವರ್ಕಾಡಿಯಲ್ಲಿ ಗ್ರಾಮ ಸೇವಕರಾಗಿ ಸೇವೆ ಆರಂಭಿಸಿ 200 ಎಕರೆಯಷ್ಟು ಬರಡು ಭೂಮಿಯಲ್ಲಿ 80ಕ್ಕೂ ಮಿಕ್ಕಿದ ಕುಟುಂಬಗಳಿಗೆ ವಸತಿ ಸೌಕರ್ಯಭಾಗ್ಯ ಒದಗಿಸಿಕೊಟ್ಟಿದ್ದರು. ಸಾಕ್ಷರತಾ ಆಂದೋಲನದಲ್ಲಿಯೂ ತನ್ನ ವಿಶಿಷ್ಟ ಚಾಪು ಮೆರೆದ ರಾಯರು ಪ್ರಥಮ ಸಾಕ್ಷರತಾ ಆಂದೋಲನಾ ಜಾಥವನ್ನು ರಾಜ್ಯಾದಾದ್ಯಂತ ಅವರು ನಡೆಸಿದ್ದರು. ಇಡೀ ಭಾರತದಲ್ಲಿಯೇ ಪ್ರಥಮ ಎಂಬಂತೆ 1977ರಲ್ಲಿ ಅವರು ತನ್ನ ನೆಚ್ಚಿನ ವರ್ಕಾಡಿಯಿಂದ ಪ್ರಾರಂಭಿಸಿದ್ದ ಈ ಜಾಥಾ ಬಳಿಕ ಸಾಕ್ಷರತಾ ಕ್ರಾಂತಿಗೆ ನಾಂದಿಯಾಯಿತು. 1975ರಲ್ಲಿ ವರ್ಕಾಡಿಯಲ್ಲಿ ಅವರು ಪ್ರಾರಂಭಿಸಿದ್ದ ವನಿತಾ ವಿಚಾರ ವಿನಿಮಯ ಕೇಂದ್ರ ಮಹಿಳಾ ಸಬಲೀಕರಣಕ್ಕೆ ಸ್ಪೂರ್ತಿಯಾಯಿತು.
ಸಾಹಿತ್ಯ
ವರ್ಕಾಡಿ ಎಂಬ ಗ್ರಾಮಕ್ಕೆ ಮಾಂತ್ರಿಕ ಸ್ಪರ್ಷವನ್ನು ನೀಡಿದ ವೆಂಕಟೇಶ್‌ರಾಯರು ಬರವಣಿಗೆಯಲ್ಲಿಯೂ ಎತ್ತಿದ ಕೈ. 'ಹ್ಯಾಂಡ್ಸ್ ಆಫ್ ಗಾಡ್' ಎಂಬ ಇವರ ಆತ್ಮಕಥನ ಆಂಗ್ಲ ಹಾಗೂ ಮಲೆಯಾಳಂ ಭಾಷೆಯಲ್ಲಿ ಪ್ರಕಟಗೊಂಡಿತ್ತು. ಇದಕ್ಕೆ ರಾಷ್ಟಿÅàಯ ಪುರಸ್ಕಾರವೂ ದೊರೆತಿತ್ತು. ಬದುಕಿನ ಉತ್ತರಾರ್ಧದಲ್ಲಿ ಅವರು ಹಲವು ಪ್ರಮುಖ ಕೃತಿಗಳ ಭಾಷಾಂತರ ಸಿದ್ದತೆಯಲ್ಲಿದ್ದರು. ಸುಮಾರು ದೇವಸ್ಥಾನಗಳ ಚರಿತ್ರೆಯನ್ನು ಅವರು ಕೊಂಕಣಿ, ಮಲೆಯಾಳಂಗೆ ಭಾಷಾಂತರ ಮಾಡಿದ್ದರು.ಪಾಂಚಜನ್ಯ, ಶೀÅಮದ್‌ಭಗವದ್ಗಿತಾ ಕಾವ್ಯವನ್ನು ಮಲೆಯಾಳಂನಿಂದ ಕನ್ನಡಕ್ಕೆ ಭಾಷಾಂತರಿಸುವ ಕಾಯಕದಲ್ಲಿದ್ದರು. ಡಾ.ಪಿ.ಎಸ್.ನಾಯರ್‌ರವರ 'ಭಗವದ್ಗಿತೆ' ಗದ್ಯ,' ಮಹಾ ಭಾಗವತಾ' ಗ್ರಂಥದ ಅನುವಾದ ಕಾರ್ಯ ಅಂತಿಮ ಹಂತದಲ್ಲಿರುವಾಗಲೇ ಅವರು ನಮ್ಮನಗಲಿದ್ದಾರೆ.ವಿಶ್ರಾಂತಿ ಕಾಲದಲ್ಲಿಯೂ ಅಧ್ಯಯನ, ಪ್ರಯಾಣದಲ್ಲಿಯೇ ಮುಳುಗಿಹೋಗಿದ್ದ ರಾಯರು ತನ್ನ ಆರೋಗ್ಯಕ್ಕಿಂತ ಮಿಗಿಲಾಗಿ ವರ್ಕಾಡಿ ಊರನ್ನು ಜತನದಿಂದ ಕಾಣುತ್ತಿದ್ದರು. ವರ್ಕಾಡಿಯನ್ನು ಬಿಟ್ಟು ತರಳಿ 20 ವರ್ಷಗಳೇ ಸಂದರೂ ಈ ಗ್ರಾಮವನ್ನು ನಿತ್ಯಶ್ಲೋಕವೆಂಬಂತೆ ಸ್ಮರಿಸುತ್ತಿದ್ದರು.
ಸಜ್ಜನಿಕೆಯ ಸಾಕಾರ ಮೂರ್ತಿ
ಸಮಾಜ ಸೇವೆ, ಗಾಂಧೀವಾದವನ್ನೇ ತನ್ನ ಜೀವಾಳವೆಂದು ಬಗೆದಿದ್ದ ರಾಯರು ತನ್ನ ಕುಟುಂಬದವರಿಗಿಂತಲೂ ಮಿಗಿಲಾಗಿ ವರ್ಕಾಡಿ ಜನತೆಯನ್ನು ಪ್ರಿತಿಸುತ್ತಿದ್ದರು. ಎಚ್‌ಐವಿ ಬಾಧಿತರ ಪರ ಹೋರಾಟ ಮಾಡಿ ಅಂತಾರಾಷ್ಟ್ರಿಯ ಗಮನವನ್ನು ಸೆಳೆದಿದ್ದ ದಿ.ವೀಣಾಧರಿಯವರ ತಂದೆಯಾದ ಎನ್.ವೆಂಕಟೇಶ್‌ರಾವ್ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು.ಯಾರಿಗೂ ನೋವುಂಟಾಗದ ರೀತಿಯಲ್ಲಿ ತನ್ನ ಬದುಕಿನ ಕೊನೆಯ ಕ್ಷಣದವರೆಗೂ ಬದುಕು ಸವೆಸಿದ ವೆಂಕಟೇಶ್‌ರಾವ್ ಇನ್ನು ನಮಗೆ ನೆನಪು ಮಾತ್ರ. 78ರ ಹರೆಯದ ಖಾದೀ ವಸ್ತ್ರಧಾರಿ ವೆಂಕಟೇಶ್‌ರಾವ್ ಚಲಿಸುವ ವಿಶ್ವವಿದ್ಯಾಲಯದಂತೆ ಅಗಾಧವಾದ ಪಾಂಡಿತ್ಯ ಹಾಗೂ ವೈದಿಕ ಜ್ಞಾನವನ್ನು ಹೊಂದಿದ್ದರು. ಯೋಗ ಪ್ರಕೃತಿ ಚಿಕಿತ್ಸೆಯ ಜತೆಗೆ ಗಾಂಧೀ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಮಾತುಗಾರಿಕೆಯೆಂದರೆ ಇವರಿಗೆ ಬಲು ಇಷ್ಟ. ಮಹಾತ್ಮಾ ಗಾಂಧೀಯವರ ಗ್ರಾಮ ಸ್ವರಾಜ್ಯದ ಸಾಫಲ್ಯತೆಗೆ ತನ್ನ ಬದುಕಿನ ಬಹುಭಾಗವನ್ನು ವ್ಯಯಿಸಿ, ಸರಳ ಬದುಕನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿದಾಯಕರಾಗಿ ಬದುಕಿದ ವೆಂಕಟೇಶ್‌ರಾಯರು ತನ್ನ ಪುತ್ರಿ ವೀಣಾಧರಿಯ ಅಗಲಿಕೆಯ ಬಳಿಕ ತುಂಬಾ ಖನ್ನರಾಗಿದ್ದರು.
ಮಹಾತ್ಮಾ ಗಾಂಧೀಜಿಯವರ 18 ಅಂಶಗಳ ಸೂತ್ರವನ್ನು ಗಾಂದೀ ಸ್ವರಾಜ್ಯ ಅನುಷ್ಠಾನಕ್ಕೆ ಬಳಸಿಕೊಂಡು ಬಡಜನತೆಗೆ ಕೃಷಿಯಿಂದ ಜೀವನ ನಿರ್ವಹಣೆಯ ಪಾಠವನ್ನೂ ಹೇಳಿಕೊಟ್ಟರು.ಪ್ರಾರಂಭದಲ್ಲಿ ವರ್ಕಾಡಿಯ ಗುಡ್ಡದಲ್ಲಿ ಗೇರು ತೋಟ ಸ್ಥಾಪಿಸುವ ಮೂಲಕ ಹಸಿರು ಚಳುವಳಿಯನ್ನು ಪರಿಚಯಿಸಿದ್ದ ರಾಯರು ತನ್ನ ಕೊನೆ ಘಳಿಗೆಯವರೆಗೂ ಸದಾ ಪ್ರವಾಸ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು , ಸರಕಾರಿ ಸೇವಾವಧಿಯಲ್ಲಿ ಭ್ರಷ್ಟಾಚಾರಗಳೊಂದಿಗೆ ರಾಜಿ ಮಾಡಿಕೊಳ್ಳದೆ ಗ್ರಾಮ ಸೇವಕ ಹುದ್ದೆಗೂ ತಿಲಾಂಜಲಿ ನೀಡಿ ,ಪಿಂಚಣಿಯನ್ನು ತ್ಯಾಗ ಮಾಡಿದ ಈ ವ್ಯಕ್ತಿಯ ಜನಪರ ಕಾಳಜಿಯ ಕಾರ್ಯಕ್ರಮಕ್ಕೆ ಅದೆಷ್ಟೋ ಮಂದಿ ಊರುಗೋಲಾಗಿದ್ದರು.
ನೆನಪಿನಂಗಳದಲ್ಲಿ ರಾಯರು....
ಗಾಂದೀ ಆದರ್ಶವನ್ನು ಮೈಗೂಡಿಸಿಕೊಂಡು, ಗಾಂದೀ ಚಳುವಳಿ, ಸರ್ವೋದಯ ಚಳುವಳಿಯಲ್ಲಿ ತನ್ನನ್ನು ತೊಡಗಿಸಿಕೊಂಡು, ವಿನೋಬಾ ಬಾವೆಯವರು ಮಂಜೇಶ್ವರದಿಂದ ಪ್ರಾರಂಭಿಸಿದ್ದ ಶಾಂತಿ ಸೇನೆಯ ಹರಿಕಾರರಾಗಿ ,ನಿಸ್ವಾರ್ಥವಾದ ಸಮಾಜ ಸೇವೆಗೆ ಮರು ವ್ಯಾಖ್ಯಾನವನ್ನು ನೀಡಿದ ವೆಂಕಟೇಶ್‌ರಾವ್ ಇನ್ನು ನಮಗೆ ನೆನಪು ಮಾತ್ರ. ಆದರೆ ಅವರು ಬದುಕಿದ ಶೈಲಿ, ಅವರ ಹೋರಾಟದ ಕಾವುಗಳು, ಅವರ ದೂರದೃಷ್ಟಿ¤Ìದ ಚಿಂತನೆಗಳು, ಅವರು ಬಿಟ್ಟು ಹೋದ ಪ್ರಿತಿಯ ಪಾಠಗಳು ನಿತ್ಯ ಶಾಶ್ವತ.ಪತ್ನಿ ಲಲಿತಾ ರಾವ್ ವೆಂಕಟೇಶ್‌ರಾಯರ ಪಯಣಕ್ಕೆ ಬೆಂಗಾವಲಾಗಿ ನಿಂತವರು. ಮಕ್ಕಳಾದ ದೇವಿಪ್ರಸಾದ್, ಸುದಾ, ಶಿವಪ್ರಕಾಶ್, ಬಾಲಾಜಿರಾವ್, ರಾಜೇಂದ್ರ ತಂದೆಯ ನೆರಳಿನಲ್ಲಿಯೇ ಇದ್ದುಕೊಂಡು ತಂದೆಯ ಪಯಣಕ್ಕೆ ಸಾಥ್ ಕೊಟ್ಟ ವರು.. ದೇಶದಾದ್ಯಂತವಿರುವ ಗಾಂಧೀ ಅನುಯಾಯಿಗಳ ಜತೆ ಅಗಾಧ ಸಂಭಂಧವನ್ನು ಹೊಂದಿದ್ದ ರಾಯರು ನಮ್ಮ ನಡುವೆ ಚಿರ ಸಂದೇಶವನ್ನು ಬಿಟ್ಟಹೋಗಿದ್ದಾರೆ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸೋಣ..
Saturday, December 25, 2010
ಅನಂತ ಮೂರ್ತಿ ಹುಟ್ಟು ಹಬ್ಬ ....
ಮೊನ್ನೆ ಅನಂತ ಮೂರ್ತಿ ಹುಟ್ಟು ಹಬ್ಬ ..ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಮುಸ್ಸಂಜೆ ಒಂದು ಕಾರ್ಯಕ್ರಮವಿತ್ತು..ಗುರುಗಳ ಹುಟ್ಟು ಹಬ್ಬದಂದೇ ಪಟ್ಟಾಭಿ ರಾಮ ಸೋಮಾಯಾಜಿ ತನ್ನ ಮದುವೆಯ ಔತಣವೂ ಏರ್ಪಡಿಸಿದ್ದರು...ಜತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ...ಕಾಲೇಜಿನ ವರಾಂಡದಲ್ಲಿ ಅನಂತಮೂರ್ತಿ ಅಭಿಮಾನಿಗಳು ನೆರೆದಿದ್ದರು.ಸಭಾ ಕಾರ್ಯಕ್ರಮ ಮುಗಿಯುತ್ತಲೇ ಭರ್ಜರಿ ಊಟ...ಅನಂತಮೂರ್ತಿಯವರು ತನ್ನ ಪತ್ನಿ ಎಸ್ತೆರ್ ಜತೆ ಊಟದ ಸವಿಯನ್ನು ಉಂಡರು..ಅದಾದ ಬಳಿಕ ಶಶಿಕಾಂತ್ ರವರಿಂದ ಸುಗಮ ಸಂಗೀತ ಧಾರೆ..ಇಡೀ ಕಾರ್ಯಕ್ರಮದಲ್ಲಿ ಅನಂತಮೂರ್ತಿ ಮತ್ತು ಪಟ್ಟಾಭಿ ದಂಪತಿ ಕೇಂದ್ರ ಬಿಂದು..
ಅನಂತ ಮೂರ್ತಿಗೆ ೭೯ ದಾಟಿದರೂ ಇನ್ನೂ ಲವಲವಿಕೆಯಲ್ಲಿರುವುದನ್ನು ನೋಡಿ ನಿಜಕ್ಕೂ ಅಚ್ಚರಿಯಾಯಿತು... ಜತೆಗೆ ಅವರ ಚಿಂತನಾ ಲಹರಿ ಅದ್ಭುತ."ಧಾರ್ಮಿಕ ಭಾರತದ ಕನಸು ಕಂಡಿದ್ದೇನೆ ಹೊರತು ಕೋಮು ಭಾರತವನ್ನಲ್ಲ..ಗಂಧದ ಗುಡಿಯ ನಾಡಾದ ಕನ್ನಡಾಂಬೆಯನ್ನು ಲೂಟಿಮಾಡಿ ನಮ್ಮ ರಾಜಕಾರಣಿಗಳು ಹಣ ಆಸ್ತಿ ಮಾಡುವುದರಲ್ಲಿ ತೊಡಗಿದ್ದರೆ, ಹಾಗೆಯೇ ಮಠಾಧೀಶರೂ ಕೂಡ ಭೂಗಳ್ಳರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಕಿಡಿಕಾರಿದ್ದು, ಹಿಂದೆ ಭಾರತದಲ್ಲಿ ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸರಂಥವರು ಧರ್ಮದ ಪರಂಪರೆಯನ್ನು ಹುಟ್ಟುಹಾಕಿದ್ದರು. ಆದರೆ ಇಂದು ನಮ್ಮ ಮಠಗಳ ಯಾವ ಸ್ವಾಮಿಗಳೂ ಈ ಧರ್ಮದ ಪರಂಪರೆ ಉಳಿಸಿಕೊಂಡಿಲ್ಲ ಎಂಬುದು ಮೂರ್ತಿಯವರ ವಾದ.. ರಾಷ್ಟ್ರೀಯತೆ ಎನ್ನುವುದು ಅಪಾಯಕಾರಿ. ಇತಿಹಾಸದಲ್ಲಿ ಈ ರಾಷ್ಟ್ರೀಯತೆ ಹುಚ್ಚು ಅನೇಕ ಯುದ್ಧಗಳನ್ನು ಮಾಡಿಸಿದೆ. ಕಾಶ್ಮೀರದಲ್ಲಿಯೂ ಇದೇ ಆಗುತ್ತಿದೆ. ಅಲ್ಲಿನ ಜನರನ್ನು ಮೈಲಿಗೊಮ್ಮೆ ಐಡೆಂಟಿಡಿ ಕಾರ್ಡ್ ತೋರಿಸಿ ಅಂತ ಹೇಳಿ ಅವರ ರಾಷ್ಟ್ರೀಯತೆಯನ್ನು ಪರೀಕ್ಷೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರಲ್ಲಿ ಬೆಳೆಸಬೇಕಾದದ್ದು ದೇಶಭಕ್ತಿಯೇ ಹೊರತು ಸಂಕುಚಿತವಾದ ರಾಷ್ಟ್ರೀಯತೆ ಅಲ್ಲ ಎಂಬುದು ಅನಂತ ಮೂರ್ತಿ ನಿಲುವಾಗಿತ್ತು..ತನ್ನ ಭಾಷಣದಲ್ಲಿ ರಾಜಕಾರಣಿಗಳ ಮೊಂಡು ರಾಷ್ಟ್ರೀಯತೆಯನ್ನು ಛೇಡಿಸಿದರು.
Subscribe to:
Posts (Atom)