Sunday, August 30, 2009

ರಾತ್ರಿ ಮತ್ತು ಪ್ರಭಾತದ ನಡುವೆ....














ಅಂತರಿಕ್ಷಕ್ಕೆ ನಿನ್ನ ಶಬ್ದ
ಕೇಳಿಸುವುದಿಲ್ಲವಾದ್ದರಿಂದ
ನಿಶ್ಯಬ್ದವಾಗಿರು ನನ್ನ ಹೃದಯವೇ
ನಿಶ್ಯಬ್ದವಾಗಿರು!

ದಿವ್ಯವಾದ ಔಷಧ
ವಿಲಾಪವನ್ನೂ,ಸಂಕಟವನ್ನೂ ಕೆಮ್ಮುತ್ತವೆ
ಅವುಗಳಿಗೆ ನಿನ್ನ ಗೀತೆಗಳು ,ಸ್ತೋತ್ರಗಳು
ಓದಲಾಗುವುದಿಲ್ಲವಾದ್ದರಿಂದ
ನಿಶ್ಯಬ್ದವಾಗಿರು!

ನಿನ್ನ ರಹಸ್ಯ ಮಂತ್ರಗಳಿಗೆ
ನಿಷೆಯಲ್ಲಿನ ಭೂತಗಳು
ಶ್ರದ್ದೆ ನೀಡದಿದ್ದುದರಿಂದ
ನಿಶ್ಯಬ್ದವಾಗಿರು!

ಅಂಧಕಾರದ ಘೋಶಯಾತ್ರೆಗಳು
ನಿನ್ನ ಸ್ವಪ್ನಗಳ ಮುಂದೆ
ವಿರಾಮಗೊಲ್ಲುವುದಿಲ್ಲ .
ಸಹನೆಯೊಂದಿಗೆ ಪ್ರಭಾತವನ್ನೂ
ನಿರೀಕ್ಷಿಸುತ್ತಿರುವವನು
ಖಂಡಿತವಾಗಿಯೂ ಅದನ್ನು
ಸಂಧಿಸುತಾನಾದ್ದರಿಂದ
ಪ್ರಕಾಶವನ್ನು ಪ್ರೀತಿಸಲ್ಪದುವವನಾದ್ದರಿಂದ
ಪ್ರಭಾತದಲ್ಲಿಯೂ ಪ್ರೀತಿಸುವವನು
ಪ್ರಭಾತ ಬರುವ ತನಕ
ನಿಶ್ಯಬ್ದವಾಗಿರು!

ನಿಶ್ಯಬ್ದವಾಗಿರು
ನನ್ನ ಹೃದಯವೇ
ನನ್ನ ಕಥೆಯ ನೀ ಕೇಳು :


ನನ್ನ ಕನಸಿನಲಿ
ಅಗ್ನಿ ಪರ್ವತಗಳ ನಾ ಕಂಡೆ
ಮಧುರ ಕಂಠದಿಂದ ಹಾಡುವ
ನಿಶಾ ಹಕ್ಕಿಯೋಂದ ನಾ ಕಂಡೆ
ತುಷಾರದ ಮೇಲಕ್ಕೆ ತಲೆ ಎತ್ತುವ
ಒಂದು ಲಿಲ್ಲಿ ಹೂವನ್ನು ಕಂಡೆ
ನನ್ನ ಕನಸಿನಲ್ಲಿ ಇವೆಲ್ಲವ ನಾ ಕಂಡೆ
ಆದರೆ....
ನನ್ನ ಅಕ್ಷಿಗಳ ತೆರೆದಾಗ
ನಾನು ನನ್ನನ್ನೇ ನೋಡಿದೆ
ಆಗಲೂ ಕ್ರೋಧಾವೇಶದಿಂದ
ನಿಂತಿರುವ ಅಗ್ನಿಪರ್ವತವ ಕಂಡಿತು
ಆದರೆ ನಿಶಾ ಹಕ್ಕಿ ಹಾಡುವುದು ಕೇಳಲಿಲ್ಲ
ಅದು ತೆವಳುವುದೂ ಕಾಣಲಿಲ್ಲ...

ಹರ್ಷದ್ ವರ್ಕಾಡಿ
(ಗಿಬ್ರಾನನ ಕನಸುಗಳಿಂದ)